Abdul Rasheed  (ಅಬ್ದುಲ್ ರಷೀದ್)
Translator

on Lyrikline: 2 poems translated

from: alemão to: canarês

Original

Translation

[aus der serie amabilis insania] 13

alemão | Nicolai Kobus

... wie ein stern aus eigner schwere
sich im teilchennebel selbst formiert
und sogleich in einer kräftekehre
wieder an sich selbst verliert,

als ob beim rühren in der kaffeetasse
plötzlich alles am ereignishorizont
hineingeriete in den sog der masse,
wo im zentrum die idee der schwärze wohnt,

kollabiert frühmorgens ein sekundenglück
(aus restlicht, eingekrümmt vor lauter mühe
abzustrahlen aus geträumtem trümmerfeld)

wie ein perfekt geformtes zuckerstück,
das ungerührt in abgekühlter brühe
endlos lang in sich zusammenfällt.

© Nicolai Kobus
from: hard cover
Münster: ardey Verlag, 2006
Audio production: Literaturwerkstatt Berlin 2008

ಸುನೀತ. ೧೩

canarês

ತನ್ನದೇ ಭಾರದಿಂದುಂಟಾದ ತಾರೆಯಂತೆ 
ತನ್ನ ದೇಹದ ಕಣವೇ ತಾನಾಗಿರುವುದು 
ಕರಗಿಹೋಗುವುದು  ತಾನೇ ಕುಂದಿದಂತೆ 
ತನ್ನೊಳಗೆ ತಾನೇ ಕಳೆದುಹೋಗುವುದು 

ಕಾಫಿ ಕಪ್ಪೊಳಗೆ ಕರಗಿಹೋಗುತ್ತಿರುವಂತೆ 
ಒಮ್ಮೆಲೆ ಎಲ್ಲವೂ ದಿಗಂತದಲ್ಲಿ ಜರುಗಿ 
ಕುಸಿಯುವುದು ಸಮಸ್ತ ರಾಶಿ ಕತ್ತಲಿನೊಳಕ್ಕೆ 
ಇರುಳೆಂಬುದು ಮಾತ್ರ ಅಲ್ಲಿ ಉಳಿಯುವುದು 
 
ಕುಸಿಯುವುದು ಬೆಳಗಿನ ಅರೆಕ್ಷಣದ ಸುಖ 
(ಅಳಿದುಳಿದ ಬೆಳಕು, ಬವಳಿ ಬಾಗಿ ಬರುವುದು 
ಕನಸ ಕಸದ ರಾಶಿಯ ಅವಶೇಷ)

ಪರಿಪೂರ್ಣ ಸಕ್ಕರೆಯ ಅಚ್ಚಿನ ಹಾಗೆ ಅನಿಸುವುದು 
ಕಲಕದಿರುವ ತಣ್ಣನೆಯ ಪೇಯದಲ್ಲಿ 
ಮುಗಿಯದೇ ಉಳಿಯುವ ಹಾಗೆ ನಿದಾನಕ್ಕೆ ಕರಗುವುದು 

Translated into Kannada by Abdul Rasheed

A result of the project Poets Translating Poets. Versschmuggel mit Südasien, organised in 2015 by the Goethe Institute in collaboration with Literaturwerkstatt Berlin

und was wenn

alemão | Nicolai Kobus

die brillantine-highlights erst post festum
ins haar geschmiert? denn eigentlich ist arbeit
was mir das hemd so pittoresk versaut um
ein plateau zu finden im verlauf der zeit

darauf ein totgesagter bau komm schau
die bögen halbrund unvollendet krisis
am bildrand ich mit bartschatten graublau
so platt getäfelt: ET QUID AMABO NISI

diese formen ganz für sich genommen
wie mit dem meißel ins geviert getrieben
zum kleinformat im rauch verschwommen
allenfalls noch fahnen gegen diesen wind
von fern und diese frage: was ich lieben

werde wenn den letzten schatten schräg
ich an den lichteinfall gelehnt die schiefe
ebene so träg ins bild gezogen haben werde:
scheiß latein und scheiß zentrale perspektive

Giorgio de Chirico
Selbstbildnis, 1920
Öl auf Holz – 50,2 x 39,5 cm

© Nicolai Kobus
unveröffentlichtem Manuskript,
Audio production: Literaturwerkstatt Berlin 2008

ಸರಿ, ಏನೀಗ

canarês

ಸಡಗರದ ಬಳಿಕ ಮುಡಿಗೆ ಬಳಿದುಕೊಂಡರೆ ಬ್ರಿಲ್ ಕ್ರೀಮು? 
ನಿಜ ಹೇಳಬೇಕೆಂದರೆ, ಈ ಕೆಲಸ ನನ್ನ ಬಟ್ಟೆಯನ್ನ ಕಲೆಗೊಳಿಸಿ ಚಿತ್ತಾರವ ಮಾಡಿದೆ 
ಸ್ವಲ್ಪ ಹೊತ್ತಿನಲ್ಲಿ ಉಬ್ಬು ನೆಲದ ಮೇಲೆ ನಿಂತಿರುವ ಪಾಳು ಕಟ್ಟಡವ ನೋಡು ಬಾ 
ಅರ್ಧ ಮುಗಿದ ಕಮಾನು, ಮುಗಿಯದ ಬಿಕ್ಕಟ್ಟು. ಚೌಕಟ್ಟಿನ ಇನ್ನೊಂದು ಅಂಚಿಗೆ ನಾನು 
ಸಂಜೆ ಐದರ ನೆರಳಿಗೆ ಬೂದು ನೀಲಿ ರಂಗು ಪಡೆದು ಮಿನುಗುವ ತೆಳ್ಳಗಿನ ದಾಡಿ.
ಹಲಗೆ ಮೇಲಿನ ಚಿತ್ರ ಈಗ ಗೋಡೆ ಮೇಲೆ. ‘ET QUID AMABO NISI’

ಈ ಆಕಾರಗಳ ಹೊರತು ಏನ ಪ್ರೀತಿಸಲಿ!
ಈ ಆಕಾರಗಳನ್ನು ಹೇಗಿದ್ದವೋ ಹಾಗೇ ಇಳಿಸಿ 
ಉಳಿ ಬಳಸಿ ಕಲ್ಲಲ್ಲಿ ಕೆತ್ತಿದ ಹಾಗೆ ಹೊಗೆ ಹಿಡಿದು ಮಸುಕಾz ಚೌಕಾಕಾರದ ಹಲಗೆ 
ಆಗಾಗ್ಗೆ ಬಾವುಟವು ಗಾಳಿಯ ವಿರುದ್ಧ ಹಾರುವುದು 
ಕೇಳುವುದು ದೂರದಿಂದ ನಾನೇನ ಪ್ರೀತಿಸಲಿ?

ಬೆಳಕಿನತ್ತಲೇ ವಾಲಿಕೊಂಡ ನೆರಳು, ಎರಡು ಗ್ರಹಿಕೆಗಳು ಒಂದೆ ಚೌಕಟ್ಟಲ್ಲಿ 
ಕಿತ್ತು ಬಿಸಾಡಿ ಲ್ಯಾಟಿನನ್ನು ಕಿತ್ತು ಬಿಸಾಡಿ ಶಿಷ್ಠ ಗ್ರಹಿಕೆಯನ್ನ.

ಇಟಾಲಿಯನ್ಚಿತ್ರಕಾರಜಾರ್ಜೋಕಿರಿಕೊನಸೆಲ್ಫ್ಪೋರ್ಟ್ರೈಟ್, ೧೯೨೦.
ಹಲಗೆಯಮೇಲಿನತೈಲಚಿತ್ರ, ೫೦.೨೩೯.೫ಸೆಂ.ಮೀ.
 

Translated into Kannada by Abdul Rasheed and Mamta Sagar

A result of the project Poets Translating Poets. Versschmuggel mit Südasien, organised in 2015 by the Goethe Institute in collaboration with Literaturwerkstatt Berlin